ಪ್ರವಾದಿ ಮಹಮ್ಮದರು ಮುಸಲ್ಮಾನರಿಗೆ ಮಾತ್ರ ಸೀಮಿತವಲ್ಲ ಹಿಂದು ಕ್ರೈಸ್ತ ಹಾಗೂ ಎಲ್ಲಾ ಜಾತಿ ಧರ್ಮದವರಿಗೂ ಸೇರಿದವರಾಗಿದ್ದಾರೆ, ಹಿಂದೂ ಧರ್ಮದ ವೇದ ಪುರಾಣ ಉಪನಿಷತ್ತುಗಳಲ್ಲಿ ಪ್ರವಾದಿ ಮಹಮ್ಮದರ ಕುರಿತು ಉಲ್ಲೇಖಿಸಿರುವುದನ್ನು ನಮಗೆ ಕಾಣಬಹುದು, ಅಲ್ಲದೇ ಪ್ರವಾದಿ ಮಹಮ್ಮದರು ಹಾಗೂ ಕಲಿಯುಗದ ಕಲ್ಕಿಯು ಒಬ್ಬರೇ ಆಗಿದ್ದಾರೆ ಎಂಬ ಅನುಮಾನಗಳಿಗೆ ಇನ್ನಷ್ಟು ಭರವಸೆ ನೀಡುವ ಭಗವದ್ಗೀತೆಯ ಶ್ಲೋಕಗಳೇ ಸಾಕ್ಷಿ. ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ | ಅಭ್ಯಥನಾಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ || ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಂ| ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ|| ಬರುತ್ತೇನೆ, ಬರುತ್ತೇನೆ, ಧರ್ಮದ ನಷ್ಟ ಉಂಟಾದಾಗ ನಾನು ಬರುತ್ತೇನೆ, ಆಗ ನಾನು ಬರುತ್ತೇನೆ, ಆಗ ನಾನು ಬರುತ್ತೇನೆ, ಆಗ ನಾನು ಸಜ್ಜನರನ್ನು ರಕ್ಷಿಸುತ್ತೇನೆ, ದುಷ್ಟರನ್ನು ನಾಶ ಮಾಡಲು ನಾನು ಧರ್ಮವನ್ನು ಸ್ಥಾಪಿಸಲು ಬರುತ್ತೇನೆ ಮತ್ತು ನಾನು ಯುಗದಲ್ಲಿ ಹುಟ್ಟಿದ್ದೇನೆ. ಧರ್ಮವು ಕಣ್ಮರೆಯಾಗಿ ಅಧರ್ಮವು ಅಧಿಕಾರ ಚಲಾಯಿಸುವ ಕಾಲದಲ್ಲಿ ದೇವರೇ ಸ್ವತಃ ಮಾನವನಾಗಿ ಅವತಾರಗೊಂಡು ಧರ್ಮವನ್ನು ಸ್ಥಾಪಿಸುವನೆಂದು ಬಹುತೇಕ ಹಿಂದುಗಳ ವಿಶ್ವಾಸ. ಆದರೆ ಇಸ್ಲಾಂ ಧರ್ಮದ ಪ್ರಕಾರ ಮನುಷ್ಯನಲ್ಲಿಯೇ ಒಬ್ಬನನ್ನು ಪ್ರವಾದಿಯನ್ನಾಗಿ ಆರಿಸುವುದಾಗಿದೆ, ಹಿಂದೂ ಪುರಾಣಗಳ ಪ್ರಕಾರ ವಿಷ್ಣುವಿನ 10 ಅವತಾರಗಳಲ್ಲಿ ಕೊನೆಯ ಅವತಾರವಾಗಿದೆ ...